Article Content
ಶ್ರೀಮನ್ನಾಯಸುಧಾ ಗ್ರಂಥವು ಮಧ್ವಸಿದ್ಧಾಂತದಲ್ಲಿ ಒಂದು ಮೇರು ಕೃತಿ. ವೇದಾರ್ಥ ನಿರ್ಣಯಕ್ಕಾಗಿ ಹೊರಟಂತಹ ಬ್ರಹ್ಮಸೂತ್ರಗಳು, ಅದರ ಅರ್ಥವನ್ನು ತಿಳಿಸುವುದಕ್ಕಾಗಿ ಹೊರಟಂತಹ ಭಾಷ್ಯ, ಅನುವ್ಯಾಖ್ಯಾನ ಹೀಗೆ ಹಲವಾರು ಗ್ರಂಥಗಳ ಮಧ್ಯದಲ್ಲಿ ಅನುವ್ಯಾಖ್ಯಾನವೆಂಬ ಗ್ರಂಥದ ಟೀಕಾರೂಪವಾದ ನ್ಯಾಯಸುಧಾ ಗ್ರಂಥದಲ್ಲಿ ತಿಳಿಸಿರುವ ಒಂದು ವಿಷಯವನ್ನು ತಿಳಿಯೋಣ. ನಾವೆಲ್ಲ ತಿಳಿದಿರುವಂತೆ ಭಗವಂತನು ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳನ್ನು ಮಾಡುತ್ತಾನೆ. ಇದು ಅವನ ಗುಣ. ದೇವರು ಅವನ ಗುಣಗಳು ಇವೆರಡೂ ಅಭೇದವಿರುವುದರಿಂದ ದೇವರು ನಿತ್ಯವಾದರೆ ಅವನಲ್ಲಿರುವ ಸೃಷ್ಟಾದಿಕರ್ತತ್ವವೂ ನಿತ್ಯವಾಗಬೇಕಷ್ಟೆ. ಆಗ ಎಲ್ಲ ಕಾಲದಲ್ಲಿ ದೇವರು ಸೃಷ್ಟಿಯನ್ನು ಸ್ಥಿತಿಯನ್ನು ಲಯಗಳನ್ನು ಮಾಡಬೇಕಾಗುತ್ತದೆ. ಏಕಕಾಲದಲ್ಲಿ ವಿರುದ್ಧವಾದ ಸೃಷ್ಟಾದಿಗಳು ಜಗತ್ತಿಗೆ ಹೇಗೆ ಒಪ್ಪುವುದು?
ಈ ಪ್ರಶ್ನೆಗೆ ಉತ್ತರವನ್ನು ಶ್ರೀಮದಾಚಾರ್ಯರು ಅನುವ್ಯಾಖ್ಯಾನದಲ್ಲಿ ತಿಳಿಸಿದ್ದಾರೆ. ಅದನ್ನು ವಿವರಿಸುತ್ತಾ ಟೀಕಾಚಾರ್ಯರು ಶಕ್ತಿ ಎಂಬ ಒಂದು ಮುಖ್ಯವಾದ ವಿಷಯವನ್ನು ನಿರೂಪಿಸುತ್ತಾರೆ. ಶಕ್ತಿ ಎಂದರೆ ನಾವೆಲ್ಲಾ ತಿಳಿದಂತೆ ಸಾಮರ್ಥ. ಸಾಮರ್ಥ್ಯವಿದ್ದಲ್ಲಿ ಕೆಲಸವಾಗಲೇಬೇಕೆಂದು ಇಲ್ಲ. ಯಾವುದಾದರೂ ಒಂದು ವಸ್ತುವನ್ನು ಎತ್ತಲು ನಮಗೆ ಸಾಮರ್ಥವಿದೆ. ಆದರೆ ಈಗ ಇಚ್ಛೆ ಇಲ್ಲದ ಕಾರಣ ಅದನ್ನು ಎತ್ತುವುದಿಲ್ಲ. ಇದರಿಂದ ನಮಗೆ ಶಕ್ತಿ ಇದ್ದರೂ ಯಾವಾಗಲೂ ಕಾರ್ಯವು ನಡೆಯಬೇಕು ಎಂದು ನಿಯಮ ಇಲ್ಲ ಎಂದು ತಿಳಿಯುತ್ತದೆ. ಅದರಂತೆ ಭಗವಂತನಿಗೆ ಸೃಷ್ಟಿ-ಸ್ಥಿತಿ-ಲಯಗಳನ್ನು ಮಾಡುವ ಶಕ್ತಿ ಸರ್ವದಾ ಇದ್ದರೂ ಇಚ್ಛೆ ಇಲ್ಲವಾದ್ದರಿಂದ ಯಾವಾಗಲೂ ಸೃಷ್ಟ್ಯಾದಿಗಳು ಇರುವುದಿಲ್ಲ. ಆದ್ದರಿಂದ ಭಗವಂತನು ಹೇಗೆ ನಿತ್ಯನೋ ಹಾಗೆ ಅವನ ಸೃಷ್ಟಿ-ಸ್ಥಿತಿ-ಲಯ ಇವುಗಳು ಕೂಡ ಶಕ್ತಿರೂಪೇಣ ನಿತ್ಯವಾಗಿ ಇರುತ್ತದೆ ಎಂದು ಉತ್ತರವನ್ನು ನೀಡಿದ್ದಾರೆ. ಹೀಗೆ ಹಲವಾರು ನಮ್ಮ ತಾತ್ವಿಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ ಶ್ರೀಮನ್ನಾಯಸುಧಾಗ್ರಂಥ.
ನ ಜಾಯತೇ ಪ್ರಿಯತೇ ವಾ ಕದಾಚಿತ್ ನಾಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋsಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥