• Home
  • ಪುನಃಪ್ರತಿಷ್ಠಾಪನೆ ಹಾಗು ನೂತನಭವನ ಉದ್ಘಾಟನೆ, ತಿರುಮಕೂಡಲು

Sri Vyasaraja Matha, Tirumakudalu

ಆತ್ಮೀಯ ಭಕ್ತಮಹಾಶಯರೇ! ದಕ್ಷಿಣಭಾರತದ ಪ್ರಯಾಗವೆಂದೇ ಪ್ರಸಿದ್ಧವಾದ, ಗುಂಜಾ ನರಸಿಂಹ, ಬ್ರಹ್ಮಾಶ್ವತ್ಥ ಮುಖ್ಯಪ್ರಾಣ, ಅಗಸ್ತೇಶ್ವರ, ನಾಗಬನ ಇವುಗಳಿಂದ ಪರಮಪವಿತ್ರವೆನಿಸಿದ ತ್ರಿಮಕುಟ (ತಿರುಮಕೂಡಲು) ಕ್ಷೇತ್ರವು ಪುರಾಣಪ್ರಸಿದ್ಧವಾಗಿದೆ. ಈ ಪುಣ್ಯಭೂಮಿಯು ಶೇಷಚಂದ್ರಿಕಾಚಾರ್ಯರೆಂದೇ ಪ್ರಖ್ಯಾತರಾದ ಮಹಾಮಹಿಮರಾದ ಶ್ರೀರಘುನಾಥತೀರ್ಥರು ತಾವೇ ಆಯ್ಕೆ ಮಾಡಿಕೊಂಡು ವೃಂದಾವನಸ್ಥರಾದ ಪುಣ್ಯತಮ ಸ್ಥಳವಾಗಿದೆ. ಇದಲ್ಲದೆ ಇನ್ನನೇಕ ಯತಿವರ್ಯರ ತಪೋಭೂಮಿಯೂ ಆಗಿದೆ. ಕಪಿಲಾ, ಕಾವೇರೀ ಮತ್ತು ಸ್ಪಟಿಕ ಸರೋವರಗಳ ಸಂಗಮಕ್ಕೆ ಹೊಂದಿಕೊಂಡಂತೆ ವೃಂದಾವನದ ಸನ್ನಿಧಿಯಿರುವುದು ಇಲ್ಲಿಯ ವಿಶೇಷ. ಈ ಹಿಂದೆ ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಪಯೋನಿಧಿತೀರ್ಥ ಶ್ರೀಪಾದಂಗಳವರು ನಿರ್ಮಾಣ ಮಾಡಿದ್ದ ಬೃಹತ್ ಕಟ್ಟಡವು ಕಾಲಕ್ರಮೇಣ ಶಿಥಿಲವಾಗಿದ್ದು ಜೀರ್ಣೋದ್ಧಾರದ ಅಗತ್ಯವಿತ್ತು. ಶ್ರೀವ್ಯಾಸರಾಜಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಭಕ್ತರ ಉದಾರ ಭಾವದ ನೆರವಿನಿಂದ ಸುಮಾರು 6ಕೋಟಿ ವೆಚ್ಚದಲ್ಲಿ ಭವ್ಯವಾದ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿದ್ದಾರೆ.

ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಗುವಂತೆ ಜೀರ್ಣೋದ್ಧಾರಗೊಂಡ ಈ ನೂತನ ಭವನದ ಉದ್ಘಾಟನಾ ಕಾರ್ಯಕ್ರಮ, ಸಂಪ್ರೋಕ್ಷಣಾ ವಿಧಿ ಹಾಗೂ ಶ್ರೀಲಕ್ಷ್ಮೀನಾರಾಯಣತೀರ್ಥರು ಪ್ರತಿಷ್ಠಾಪಿಸಿದ ಮುಖ್ಯಪ್ರಾಣದೇವರ ಪುನಃಪ್ರತಿಷ್ಠಾಪನಾ ಕಾರ್ಯಕ್ರಮಗಳು ವೈಭವದಿಂದ ತ್ರಿಮಕುಟ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿವೆ. ಪ್ರತಿದಿನವೂ ಹೋಮಗಳು, ವೇದ, ಸರ್ವಮೂಲ, ವ್ಯಾಸತ್ರಯಗ್ರಂಥಗಳ ಪಾರಾಯಣವು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಲ್ಲೂ ಸದ್ಭಕ್ತರು ಸಕುಟುಂಬರಾಗಿ ಆಗಮಿಸಿ ಹರಿ-ವಾಯು-ಗುರುಗಳ, ಶ್ರೀಮೂಲಗೋಪಾಲಕೃಷ್ಣದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಸೌಕರ್ಯಗಳು : ಯಾತ್ರಾರ್ಥಿಗಳಿಗೆ ವಸತಿ, ತೀರ್ಥಪ್ರಸಾದ, ತೀರ್ಥಕ್ಷೇತ್ರ ವಿಧಿ, ಉಪನಯನ, ಷಷ್ಟಿಪೂರ್ತಿ ಶಾಂತಿ ಮೊದಲಾದ ಶುಭ ಕರ್ಮಗಳನ್ನು ಮಾಡಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ. ಅನೇಕ ದಿನಗಳ ವರೆಗೆ ಇದ್ದು ಸೇವೆ ಸಲ್ಲಿಸುವವರಿಗೂ ವ್ಯವಸ್ಥೆಯನ್ನು ಮಾಡಲವಾಗುವಂತೆ ಕಟ್ಟಡವನ್ನು ಕಟ್ಟಲಾಗಿದೆ. ಯಾವುದೇ ಗ್ರಂಥದ ಆರಂಭ, ಮಂಗಳ, ಉಪನ್ಯಾಸಗಳು ಎಲ್ಲದಕ್ಕೂ ಇಲ್ಲಿ ಅವಕಾಶಗಳು ಇರುತ್ತವೆ. ಇದರೊಂದಿಗೆ ಗತಿಸಿದ ಹಿರಿಯರಿಗೆ ಔರ್ಧ್ವದೇಹಿಕ(ಹದಿಮೂರು ದಿನಗಳ) ವಿಧಿಗಳನ್ನು ನೆರವೇರಿಸಲು ಕೂಡ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.

Panchamrita Seva Contribution
₹201.00 /-
Annadana Seva Contribution
₹2,001.00 /-
Nuthana Vastra Seva
₹5,001.00 /-