Event Description
ಆತ್ಮೀಯ ಸಜ್ಜನ ಬಂಧುಗಳೇ! ಶ್ರೀವ್ಯಾಸರಾಜ ಮಠಾಧೀಶರಾದ ಪರಮಪೂಜ್ಯರಾದ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದoಗಳವರು ವಿದ್ಯಾಕರ್ಣಾಟಕ ಸಿoಹಾಸನವನ್ನೇರಿ ಹತ್ತುವಸ೦ತಗಳು ಸಲ್ಲುತ್ತಿವೆ.
ಈ ಅವಧಿಯಲ್ಲಿ ಶ್ರೀಪಾದರು ನಡೆಸಿದ ಬಹುಮುಖ ಕಾರ್ಯಗಳು ದೊಡ್ಡ ಚಮತ್ಕಾರವೇ ಸರಿ. ಶ್ರೀಪಾದರ ನೇತೃತ್ವದಲ್ಲಿ ಶ್ರೀಮಠವು ಹತ್ತುವರ್ಷಗಳಲ್ಲಿ ನೂರು ವರ್ಷದ ಸಾಧನೆಯನ್ನು ಮಾಡಿದ್ದು ತಮ್ಮೆಲ್ಲರಿಗೂ ವಿದಿತವೇ ಆಗಿದೆ . ಏಕಕಾಲದಲ್ಲಿ ಶ್ರೀಮಠವು ನಡೆಸಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗಳು ಶ್ರೀಪಾದರಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರ ದಿವ್ಯಸಾನ್ನಿಧ್ಯವನ್ನು ದೃಢೀಕರಿಸುತ್ತದೆ. ಭವ್ಯವ್ಯಕ್ತಿತ್ವದ ಇಂತಹ ಶ್ರೀಪಾದರನ್ನು ಅಭಿವಂದಿಸುವುದು ನಮ್ಮೆಲ್ಲರ ಮುಖ್ಯಕರ್ತವ್ಯವಾಗಿದೆ. ಆದ್ದರಿಂದ ಶ್ರೀಪಾದರ ಪಟ್ಟಾಭಿಷೇಕದ ದಶಮಾನೋತ್ಸವದ ಈ ಶುಭಸಂದರ್ಭದಲ್ಲಿ ವರ್ಷಪೂರ್ತಿ ಅನೇಕ ಕಾರ್ಯಕ್ರಮಗಳನ್ನು ವಿವಿಧ ಊರುಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಮಹೋತ್ಸವದ ಉದ್ಘಾಟನೆಯನ್ನು ಅನೇಕ ಪೀಠಾಧ್ರತಿಗಳ ದಿವ್ಯಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಎಲ್ಲ ಭಗವದ್ಭಕ್ತರೂ ಈ ಕಾರ್ಯಕ್ರಮದಲ್ಲಿ ಸಕುಟುಂಬರಾಗಿ ಭಾಗವಹಿಸಿ ಗುರುಗಳ ಅನುಗ್ರಹವನ್ನು ಪಡೆಯಬೇಕೆಂದು ಕೋರುತ್ತೇವೆ.
ಕಾರ್ಯಕ್ರಮಗಳ ವಿವರ
ಬೆಳಗ್ಗೆ
7:30 - ಸಂಸ್ಥಾನ ಪೂಜೆ
8:00 -ಶ್ರೀಮಠದ ಅನೇಕ ವಿದ್ವಾಂಸರಿಂದ ಮಂತ್ರ ಜಪ, ಪುರಶ್ಚರಣೆ, ಸಚ್ಚಾಸ್ತ್ರ ಪಾರಾಯಣ, ಸಮರ್ಪಣೆಯು ನಡೆಯಲಿದೆ
8:30 - ಸಾಮೂಹಿಕ ವಾಯುಸ್ತುತಿ ಪಾರಾಯಣ, ಯಂತ್ರೋದ್ಧಾರಕ ಹನುಮತ್ರೋತ್ರ ಪಾರಾಯಣ
10:30 - ವಿರಜಾ ಮೊದಲಾದ ಹೋಮ ಪೂರ್ಣಾಹುತಿ
10:45 - ವಿದ್ವಾಂಸರಿಂದ ಉಪನ್ಯಾಸ
ಮಧ್ಯಾಹ್ನ
12:30 - ತೀರ್ಥಪ್ರಸಾದ
ಸಂಜೆ
6:30 - ಸಂವಾದ. ವಿದ್ವಾನ್. ರಾಮವಿಠಲಾಚಾರ್ಯ ಮತ್ತು ಇತರ ವಿದ್ವಾಂಸರು ವಿಷಯ - ಮಾಧ್ವಸಿದ್ಧಾಂತದಲ್ಲಿ ಮೋಕ್ಷಸ್ವರೂಪ ಮತ್ತು ಭಗವಂತನ ಸರ್ವಶಬ್ದವಾಚ್ಯತ್ವ
7:00 - ವಿದ್ವಾಂಸರಿಂದ ಸಂವಾದ
7:30 - ಶ್ರೀಪಾದರಿಂದ ಅನುಗ್ರಹ ಸಂದೇಶ
ಸ್ಥಳ: ಶ್ರೀ ವ್ಯಾಸರಾಜ ಮಠ, ಬಸವನಗುಡಿ
