ಧರ್ಮಸ್ಥಳದ ದಿಗ್ವಿಜಯದ ವಿವರ ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ವಿದ್ಯಾಕರ್ನಾಟಕ ಸಿಂಹಾಸನಾಧೀಶ್ವರ ಶ್ರಿಮದ್ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ1008 ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಇಂದು ಸೌತಡ್ಕ ಶ್ರೀಗಣಪತಿ ದೇವಸ್ಥಾನಕ್ಕೆ ಭೇಟಿಕೊಟ್ಟುರು. ನಂತರ ಕೊಕ್ಕಡ ವೈದ್ಯನಾಥೇಶ್ವರನ ದರ್ಶನವನ್ನು ಪಡೆದರು. ಶ್ರೀಕೃಷ್ಣಾಮೃತಪರಮಾರ್ಣವಾಭಿಧಾನಾಮ್ ಚಕ್ರೇ ಸದ್ವಚನತತಿಮ್ ಸ್ವಭಕ್ತಭೂತ್ಯೈ ಶ್ರೀಮದಾಚಾರ್ಯರು ಕೊಕ್ಕಡ ಕ್ಷೇತ್ರಕ್ಕೆ ಆಗಮಿಸಿ ವೈದ್ಯನಾಥೇಶ್ವರನ ಸನ್ನಿಧಿಯಲ್ಲಿ ಸಜ್ಜನರುದ್ಧಾರಕ್ಕೆ ಶ್ರೀಕೃಷ್ಣಾಮೃತ ಮಹಾರ್ಣವ ಎಂಬ ಕೃತಿಯನ್ನ ರಚನೆ ಮಾಡಿದಂತಹ ಸ್ಥಳ. ಇಂತಹ ಪವಿತ್ರ ಕ್ಷೇತ್ರದಲ್ಲಿ ಶ್ರೀಪಾದಂಗಳವರು ಧನ್ವಂತರಿ ಹೋಮದಲ್ಲಿ ಭಾಗವಹಿಸಿದ್ದರು, ನಂತರ ಕಲಶಾಭಿಷೇಕವೂ ನಡೆಯುವಲ್ಲಿ ಕಾರ್ಯಕ್ರಮವು ಸುಸಂಪನ್ನವಾಯಿತು. ಶ್ರೀಮದಾಚಾರ್ಯರು ಮತ್ತೊಂದು ಅಸಾಧಾರಣ ಕೃತಿಯಾದ ಕರ್ಮನಿರ್ಣಯ ವನ್ನು ರಚಿಸಿದ ಕ್ಷೇತ್ರಕ್ಕೂ ಶ್ರೀಪಾದರು ಭೇಟಿ ಕೊಟ್ಟರು. ನಂತರ ಶ್ರೀಪಾದರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟುರು. ಶ್ರೀ ಹರ್ಷೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳ ಪರವಾಗಿ ವಿಶೇಷ ಗೌರವದೊಂದಿಗೆ ಶ್ರೀಪಾದರನ್ನು ಬರಮಾಡಿಕೊಂಡು, ಶ್ರೀ ಮಂಜುನಾಥನ ದರ್ಶನವನ್ನು ಮಾಡಿಸಿದರು. ಶ್ರೀಪಾದರು ಹೆಗ್ಗಡೆ ದಂಪತಿಗಳಿಗೆ ಆಶೀರ್ವದಿಸಿ ಅನುಗ್ರಹಿಸಿದರು.