Chaturmasya 2026

ದಶಮ ಚಾತುರ್ಮಾಸೋತ್ಸವ
ಶ್ರೀಶೇಷಚಂದ್ರಿಕಾಚಾರ್ಯರ ದಿವ್ಯಸಾನ್ನಿಧ್ಯದಲ್ಲಿ
ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ 10ನೇ ಚಾತುರ್ಮಾಸ್ಯ ಮಹೋತ್ಸವ
ದಿನಾಂಕ 08-08-2026 ರಿಂದ 26-09-2026 ವರೆಗೆ
ತಿರುಮಕೂಡಲು
ಟಿ. ನರಸೀಪುರ

ಆತ್ಮೀಯ ಸಜ್ಜನರೇ! ವಿದ್ಯಾಕರ್ಣಾಟಕ ಸಿಂಹಾಸನವೆಂದೇ ಖ್ಯಾತಿವೆತ್ತ ಶ್ರೀವ್ಯಾಸರಾಜಮಠ ಮಹಾಸಂಸ್ಥಾನವು,ಮುನಿತ್ರಯರಿಂದ ಅಲಂಕೃತವಾದ ದಿವ್ಯಪೀಠವಾಗಿದೆ. ಶ್ರೀಮನ್ಯಾಯಸುಧಾ-ವ್ಯಾಸತ್ರಯಾದಿ ಗ್ರಂಥಕರ್ತೃಗಳೂ, ವೇದವ್ಯಾಖ್ಯಾನಕಾರರೂ, ಮಹಾತಪಸ್ವಿಗಳೂ, ಸಮಾಜೋದ್ಧಾರಕರೂ, ಭಕ್ತಾನುಕಂಪಿಗಳೂ ಆದ ಅನೇಕ ಮಹನೀಯರು ಈ ಪೀಠವನ್ನು ಅಲಂಕರಿಸಿ ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಅಂತಹ ಭವ್ಯ ಪರಂಪರೆಯಲ್ಲಿ ಅಧುನಾ ವಿರಾಜಮಾನರಾದ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಶಾಸ್ತ್ರಪಾಠ, ಸಂಸ್ಥಾನಪೂಜಾ, ಮಠದ ಅಭಿವೃದ್ಧಿ ಹಾಗು ಭಕ್ತರ ಉದ್ಧಾರ ಮೊದಲಾದ ಕಾರ್ಯಗಳಲ್ಲಿ ಸದಾ ವ್ಯಾಹೃತರಾಗಿರುವರು. ಪ್ರಸ್ತುತ ಶ್ರೀಪಾದರು ತಮ್ಮ 10ನೇ ಚಾತುರ್ಮಾಸ್ಯವನ್ನು ಪುರಣಪ್ರಸಿದ್ಧವಾದ ತ್ರಿಮಕುಟಕ್ಷೇತ್ರವೆಂದೇ ಖ್ಯಾತಿವೆತ್ತ ತಿರುಮಕೂಡಲಿನಲ್ಲಿ ಸಂಕಲ್ಪಿಸಲಿದ್ದಾರೆ. ಕಾವೇರೀ, ಕಪಿಲಾ ಮತ್ತು ಸ್ಪಟಿಕಸರೋವರಗಳ ಸಂಗಮದಿಂದ ದಕ್ಷಿಣದ ಪ್ರಯಾಗವೆಂದೇ ಪುರಾಣ ಪ್ರಸಿದ್ದ ಈ ಕ್ಷೇತ್ರವು ಗುಂಜಾನರಸಿಂಹ, ಚತುರ್ಯುಗ ಅಶ್ವತ್ಥ, ಮುಖ್ಯಪ್ರಾಣ, ಅಗಸ್ತೇಶ್ವರ, ಶ್ರೀಶೇಷಚಂದ್ರಿಕಾಚಾರ್ಯಾದಿ ಗುರುಗಳ ಮೂಲವೃಂದಾವನಗಳ ಸನ್ನಿಧಾನದಿಂದ ಅದ್ವಿತೀಯವೆನಿಸಿದೆ. ಸಂಗಮಕ್ಕೆ ಅತಿಸನಿಹದಲ್ಲಿರುವ ಶ್ರೀಮಠದ ಜೀರ್ಣೋದ್ಧಾರವನ್ನು ನಡೆಸಿದ ಶ್ರೀಪಾದರು ಈಗ ನಿರ್ಮಾಣಗೊಂಡಿರುವ ಭವ್ಯವಾದ ಶ್ರೀಮಠದ ಭವನದಲ್ಲಿ ಪಾಠಪ್ರವಚನಾದಿಗಳೊಂದಿಗೆ ತಮ್ಮ ಚಾತುರ್ಮಾಸ್ಯದ ಅವಧಿಯಲ್ಲಿ ನೆಲೆಸಲಿರುವರು. ಭಕ್ತರೆಲ್ಲರೂ ಚಾತುರ್ಮಾಸ್ಯದ ಈ ಅವಧಿಯಲ್ಲಿ ಸಕುಟುಂಬರಾಗಿ ಆಗಮಿಸಿ ಎಲ್ಲ ದೇವತಾಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ. ಚಾತುರ್ಮಾಸ್ಯ ಸೇವಾಸಮಿತಿ | ಶ್ರೀವ್ಯಾಸರಾಜಮಠ (ಸೋಸಲೆ) | ತಿರುಮಕೂಡಲು

ಚಾತುರ್ಮಾಸ್ಯದ ಪರ್ವಕಾಲದಲ್ಲಿ ದಾನಗಳಲ್ಲಿ ಶ್ರೇಷ್ಠವೆನಿಸಿದ ಗೋದಾನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಗೋಗ್ರಾಸ ಸೇವೆಯನ್ನೂ ಸಲ್ಲಿಸಲು ಅವಕಾಶವಿದೆ

ಚಾತುರ್ಮಾಸ್ಯದ ಪ್ರತಿನಿತ್ಯದ ಕಾರ್ಯಕ್ರಮಗಳು
7:00-8:00 AM - ಶ್ರೀಪಾದಂಗಳವರಿಂದ ಪಾಠ
8.30-10.30 AM - ಸಂಸ್ಥಾನ ಪೂಜೆ
11.00 AM - ಪಾದಪೂಜೆ | ಮುದ್ರಾಧಾರಣೆ
11:30 AM - ವಿದ್ವಾಂಸರಿಂದ ಉಪನ್ಯಾಸ
1:00 PM - ಭಿಕ್ಷೆ - ತೀರ್ಥ ಪ್ರಸಾದ
2:30 PM - ಮಂತ್ರಾಕ್ಷತೆ
7:30-8:30 PM - ಸಾಂಸ್ಕೃತಿಕ ಕಾರ್ಯಕ್ರಮ
9:00 PM - ತೊಟ್ಟಿಲು ಪೂಜೆ

Seva dates available: 08 Aug 2026 to 26 Sep 2026

Madhu Abhisheka - ಮಧು ಅಭಿಷೇಕ
₹500.00 /-
GO DANA & GO GRASA SEVA - ಗೋ ದಾನ ಮತ್ತು ಗೋ ಗ್ರಾಸ ಸೇವೆ
₹500.00 /-
KANAKABHISHEKA TO SRI MOOLA GOPALAKRISHNA DEVARU WITH SRI RUKMINI & SRI SATYABHAMA - ರುಕ್ಕಿಣಿ ಸತ್ಯಭಾಮ ಸಮೇತ ಶ್ರೀಮೂಲಗೋಪಾಲಕೃಷ್ಣ ದೇವರಿಗೆ ಕನಕಾಭಿಷೇಕ
₹1,000.00 /-
ONE-DAY CHATURMASYA JNANA YAJNA SEVA - ಚಾತುರ್ಮಾಸ್ಯದ ಒಂದು ದಿನದ ಜ್ಞಾನಯಜ್ಞ ಸೇವಾ
₹2,000.00 /-
YATI HASTODAKA SEVA - ಯತಿಹಸ್ತೋದಕ
₹2,000.00 /-
PAADA POOJA - ಪಾದಪೂಜೆ
₹5,000.00 /-
SAMOOHIKA BHIKSHA SEVA - ಸಾಮೂಹಿಕ ಭಿಕ್ಷೆ ಸೇವಾ
₹10,000.00 /-
TOTTILU POOJA SEVA - ರಾತ್ರಿ ತೊಟ್ಟಿಲು ಪೂಜೆ ಸೇವಾ
₹10,000.00 /-
VISHESHA BHIKSHA SEVA - ವಿಶೇಷ ಭಿಕ್ಷಾ ಸೇವಾ
₹25,000.00 /-
ANNA SANTARPANE SEVA ON SPECIAL CHATURMASYA DAYS - ಚಾತುರ್ಮಾಸ್ಯದ ವಿಶೇಷ ದಿನಗಳ ಅನ್ನಸಂತರ್ಪಣೆ ಸೇವಾ
₹50,000.00 /-
PRATYEKA BHIKSHA SEVA (EXCLUSIVE BHIKSHA - ಪ್ರತ್ಯೇಕ ಭಿಕ್ಷಾ ಸೇವಾ
₹100,000.00 /-
COMPLETE CHATURMASYA JNANA YAJNA SEVA - ಚಾತುರ್ಮಾಸ್ಯದ ಸಂಪೂರ್ಣ ಜ್ಞಾನಯಜ್ಞ ಸೇವಾ
₹200,000.00 /-
COMPLETE CHATURMASYA ANNADANA SEVA - ಚಾತುರ್ಮಾಸ್ಯದ ಸಂಪೂರ್ಣ ಅನ್ನದಾನ ಸೇವಾ
₹500,000.00 /-