ಆತ್ಮೀಯರೇ, ಶ್ರೀವ್ಯಾಸರಾಜಮಠಾಧೀಶ್ವರರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಪೀಠಾರೋಹಣ ಮಾಡಿ ಆಸ್ತಿಕ ಸಮಾಜಕ್ಕೆ ನೀಡಿದ ಕೊಡುಗೆಯು ಬಹಳವಾದದ್ದು, ವರ್ಷಗಳು ಹತ್ತು ಕಳೆದರೂ ನೂರು ವರ್ಷದ ಸಾಧನೆಯನ್ನು ಮಾಡಿದ್ದಾರೆ ಶಾಸ್ತ್ರಪಾಠ, ವಿದ್ವಾಂಸರ ನಿರ್ವಾಣ, ಮಠಗಳ ಸ್ಥಾಪನೆ, ಸಾಮಾಜಿಕ ಸುಧಾರಣೆ ಮೊದಲಾದ ಅವರ ಕಾರ್ಯಗಳಿಂದ ಉಪಕೃತವಾಗುತ್ತಿರುವ ನಾವೆಲ್ಲರೂ ಪೂಜ್ಯ ಶ್ರೀಪಾದರು ನಿರಂತರವಾಗಿ ನಮ್ಮನ್ನು ಅನುಗ್ರಹಿಸುತ್ತಾ ಮಾರ್ಗದರ್ಶನ ನೀಡುತ್ತಿರ ಬೇಕೆಂದು ಬಯಸುತ್ತೇವೆ. ಅದಕ್ಕಾಗಿ ಶ್ರೀಪಾದರ ಶಿಷ್ಯವರ್ಗವು ಪಾರಾಯಣ ಯಜ್ಞವೊಂದನ್ನು ಆಯೋಜಿಸಿದೆ. ಈ ಪಾರಾಯಣ ಯಜ್ಞದಲ್ಲಿ ಪ್ರತಿಯೊಬ್ಬ ಶ್ರದ್ಧಾಳು ಸ್ತ್ರೀ/ಪುರುಷರು ಭಾಗವಹಿಸ ಬೇಕೆಂದು ವಿನಂತಿಸುತ್ತೇವೆ.
No Seva available.